ಅಸೈನ್ಮೆಂಟ್ - 9
ಅಸೈನ್ಮೆಂಟ್ - 9
ಶಿಕ್ಷಕರ ಹೆಸರು:- ರಘುಪತಿ ರೆಡ್ಡಿ ಪಿ
ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ರವೇಲಿ ತಾ/ಜಿ/ ರಾಯಚೂರು.
**** ಸದರಿ ಮನೆಯಿಂದಲೇ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400 ಪದಗಳು ಲೇಖನ****
ಕಲಿಕೆ ನಿರಂತರವಾದದ್ದು ಅದು ನಿಂತ ನೀರಾಗಬಾರದು. ನಾವು ಇಂದು ಶಿಕ್ಷಕ ವೃತ್ತಿಯಲ್ಲಿ ಭಾಗಿಯಾಗಿದ್ದರು ಅದರಲ್ಲಿ ಯಶಸ್ಸು ಪಡೆಯಬೇಕೆಂದರೆ ಇನ್ನೂ ಹೆಚ್ಚಿನ ಜ್ಞಾನ, ತಿಳುವಳಿಕೆ, ತರಬೇತಿ ಅವಶ್ಯಕವಾಗಿರುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವುದೇ ಶಿಕ್ಷಕ ವೃತ್ತಿಯ ಮುಖ್ಯ ಗುರಿ.
1. ವೃತ್ತಿ ನೈಪುಣ್ಯತೆಗಾಗಿ ಇಲಾಖೆಯ ಸಮಾಜ ವಿಜ್ಞಾನ ಮತ್ತು ಕನ್ನಡ ಆನ್ಲೈನ್ ತರಬೇತಿಯಲ್ಲಿ ಪಾಲ್ಗೊಂಡು ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನ ಪಡೆದಿರುತ್ತೇನೆ ಹಾಗೂ ಅವರು ಸೂಚಿಸಿರುವ ಹಲವು ಚಟುವಟಿಕೆ ಆಧಾರಿತ ಪಾಠ ಬೋಧನೆ ಯೋಜನೆಯನ್ನು ತಯಾರಿಸಿಕೊಂಡಿರುತ್ತೇನೆ.
2. ವೃತ್ತ ಪತ್ರಿಕೆ, ಕಥೆ, ಕಾದಂಬರಿ ಮತ್ತು ಮ್ಯಾಕ್ಸಿನ್ ಗಳನ್ನು ಸಂಗ್ರಹಿಸಿ ಓದಿದ್ದೇನೆ.
3. 6 ರಿಂದ 8ನೇ ತರಗತಿಯ ಸಮಾಜ ವಿಜ್ಞಾನ ಪಾಠೋಪಕರಣಗಳನ್ನು ತಯಾರಿಸಿಕೊಂಡಿದ್ದೇನೆ.
4. ಸೇತುಬಂದ ಪೂರ್ವ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಸಾಮರ್ಥ್ಯಗಳ ಪಟ್ಟಿ ಸಿದ್ಧಪಡಿಸಿದ್ದೇನೆ.
5. ಕನ್ನಡ ಚಿತ್ರರಂಗದ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೌಲ್ಯಾಧಾರಿತ ಕೆಲವು ಸಿನಿಮಾಗಳನ್ನು ಯೂಟ್ಯೂಬ್ನಲ್ಲಿ ವೀಕ್ಷಿಸಿದ್ದೇನೆ.
ಉದಾಹರಣೆಗೆ:-ದ್ವೀಪ ,ಸಂಸ್ಕಾರ ಇತ್ಯಾದಿ.
6. ಭೂಗೋಳಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದೇನೆ.
7. ಬೋಧನೆ ಸರಳಗೊಳಿಸುವಂತಹ ಹಲವು ತಂತ್ರಗಳ ಬಗ್ಗೆ ಗೆಳೆಯರಿಂದ ಮಾಹಿತಿ ಮತ್ತು ಮಾರ್ಗದರ್ಶನ ಪಡೆದಿದ್ದೇನೆ.
8. ಮನೆಯಿಂದಲೇ ಮಕ್ಕಳ ಕಲಿಕೆಗೆ ನೆರವು ನೀಡಲು ಪೋಷಕರಿಗೆ ಕರೆ ಮಾಡಿ ನಿರಂತರ ಮಾರ್ಗದರ್ಶನ ನೀಡುತ್ತಿದ್ದೇನೆ.
8. ತಂತ್ರಜ್ಞಾನ ಆಧಾರಿತ ಬೋಧನೆಯ ಬಗ್ಗೆ ಹಲವು ಮೂಲಗಳಿಂದ ಮಾಹಿತಿ ಮತ್ತು ಸಲಹೆಗಳನ್ನು ಪಡೆದಿದ್ದೇನೆ.
9. ಮಕ್ಕಳ ಕಲಿಕೆಗೆ, ಕೌಶಲ್ಯಗಳಿಗೆ ನೆರವಾಗುವಂತಹ ಕೆಲವು ಯಾಪ್ ಬಗ್ಗೆ ಮಾಹಿತಿ ಮತ್ತು ಅವುಗಳನ್ನು ಸಂಗ್ರಹಿಸಿದ್ದೇನೆ.
10. ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಅರಿತು ಅದರಲ್ಲಿ ನನಗೆ ಹಿಡಿಸಿದಂತಹ ಕೆಲವು ಸಾಹಿತ್ಯದ ಭಾಗವಾದ ಸಂಸ್ಕಾರ, ಆವರಣ, ಚೋಮನದುಡಿ ,ಮುಳುಗಡೆ,ಅಬಚೂರಿನ ಪೋಸ್ಟ್ ಆಫೀಸ್,ಯಾನ ಮುಂತಾದ ಗಣ್ಯ ಲೇಖಕರ ಕೃತಿಗಳನ್ನು ಓದಿದ್ದೇನೆ.
11. ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಪರಿಚಯಿಸಲು ನೆರವಾಗುವಂತಹ ಪ್ರಶ್ನೆಗಳ ಕ್ವಿಜ್ ಬ್ಯಾಂಕನ್ನು ತಯಾರಿಸಿದ್ದೇನೆ.
12. ಈಗ ಹಬ್ಬಿರುವ ಸಾಂಕ್ರಾಮಿಕ ರೋಗವಾದ ಕರೋನಾ ಮತ್ತು ಹಿಂದೆ ಹಬ್ಬಿ ಅಂತ್ಯಗೊಂಡ ಹಲವು ಸಾಂಕ್ರಾಮಿಕ ರೋಗಗಳ ಬಗ್ಗೆ ಅಧ್ಯಯನ ಮಾಡಿದ್ದೇನೆ.
ಒಬ್ಬ ಶಿಕ್ಷಕನಾಗಿ ಪ್ರತಿಯೊಂದು ವಿದ್ಯಾರ್ಥಿಗೂ ಜ್ಞಾನಾರ್ಜನೆ ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸುವುದೇ ನಮ್ಮ ವೃತ್ತಿಗೆ ನಾವು ಕೊಡುವ ದೊಡ್ಡ ಕೊಡುಗೆ ಅದಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂಬುದು ನನ್ನಲ್ಲಿರುವ ಆತ್ಮವಿಶ್ವಾಸ.
*****ಧನ್ಯವಾದಗಳು******
Comments
Post a Comment