ಅಸೈನ್ಮೆಂಟ್ 10

                           ಅಸೈನ್ಮೆಂಟ್ - 10

 ಉನ್ನತೀಕರಿಸಿದ ಸರಕಾರಿ ಹಿರಿಯ     ಪ್ರಾಥಮಿಕ ಶಾಲೆ ಗುಂಡ್ರವೇಲಿ               ತಾ,ಜಿ :- ರಾಯಚೂರು

               ಶಿಕ್ಷಕರ ಹೆಸರು:- ರಘುಪತಿ ರೆಡ್ಡಿ ಪಿ
               
   
***** ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ( ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು) ನಮ್ಮ ಸಲಹೆ ಮತ್ತು ಕಾರ್ಯತಂತ್ರಗಳ ಪಟ್ಟಿ****

            "ಬಾರದು ಬಪ್ಪದು ಬಪ್ಪದು ತಪ್ಪದು" ಮನುಷ್ಯ ಸಮಯದ ಗುಲಾಮ. ಮಾನವ ಇಂದು ತನ್ನ ಅವಶ್ಯಕತೆಗಳಿಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕೈ ಹಾಕಿ ಯಶಸ್ಸು ಪಡೆದಿದ್ದಾನೆ. ಮಾನವ ಎಷ್ಟೇಎತ್ತರಕ್ಕೆ ಬೆಳೆದರು ಪ್ರಕೃತಿಯ ಮುಂದೆ ಮಂಡಿಯೂರಿ ಕೂಡ ಬೇಕಾಗುತ್ತದೆ. ಇತ್ತೀಚೆಗೆ ಪ್ರಪಂಚದಾದ್ಯಂತ ಸುಮಾರು ತಿಂಗಳುಗಳಿಂದ ಕೊರೋನಾ ಎಂಬ ಕಾಣದ ಜೀವಿಯೊಂದು ಮನುಷ್ಯನನ್ನು ತಲ್ಲಣಗೊಳಿಸಿದೆ ಇದರಿಂದ ಪ್ರಪಂಚದ ಆರ್ಥಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಅದರಂತೆ ನಾವು ನಮ್ಮ ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತಹ ಯೋಜನೆಗಳನ್ನು ರೂಪಿಸಬೇಕಾಗಿದೆ. ಅದರಂತೆ ನಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ ನಾನು ಕೈಗೊಂಡ ಕಾರ್ಯತಂತ್ರ ಹಾಗೂ ಸಲಹೆಗಳು ಪಟ್ಟಿ....

* ವೈರಸ್ ಹರಡುವ ಬಗೆಯನ್ನು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕರೆ ಮಾಡಿ ಜಾಗೃತಿ ಮೂಡಿಸಲಾಯಿತು.

* ಮಕ್ಕಳ ಕಲಿಕೆಗೆ ದೂರದರ್ಶನ ವಾಹಿನಿಯಲ್ಲಿ ಪ್ರಸಾರ ವಾಗುವಂತಹ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಅವುಗಳನ್ನು ಪಾಲಿಸುವಂತೆ ತಿಳಿಸಲಾಯಿತು.

* ಶಿಕ್ಷಣದ ಮಹತ್ವ ಅದರಿಂದಾಗುವ ಬೆಳವಣಿಗೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಯಿತು.

* ವಿದ್ಯಾರ್ಥಿಗಳ ತಂದೆ-ತಾಯಿಗಳಿಗೆ ಬೆಳಗಿನ ಅವಧಿ ಅಥವಾ ಸಂಜೆಯ ಅವಧಿಯಲ್ಲಿ ಬಿಡುವು ಮಾಡಿಕೊಂಡು ಕನಿಷ್ಠ 1:00 ಮಕ್ಕಳನ್ನು ಅಭ್ಯಾಸಕ್ಕೆ ಅಣಿಗೊಳಿಸಲು ತಿಳಿಸಲಾಯಿತು.

* ಬರವಣಿಗೆ ಉತ್ತಮ ಮತ್ತು ವೇಗಗೊಳಿಸಲು ದಿನಾಲು ಒಂದು ಪುಟ ಕನ್ನಡ ಪಾಠ ಬರೆಯಲು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

*ಮಕ್ಕಳಲ್ಲಿ ಚಿತ್ರಕಲೆಗೆ ಪ್ರೋತ್ಸಾಹ ನೀಡಲು ಪಾಠಗಳಲ್ಲಿ ಬರುವ ವಿವಿಧ ಚಿತ್ರಗಳು ಮತ್ತು ನಕಾಶೆಗಳನ್ನು ಬಿಡಿಸಲು ತಿಳಿಸಲಾಯಿತು.

* ಶಿಕ್ಷಣಕ್ಕೆ ಸಂಬಂಧಿಸಿದ ಯೂಟ್ಯೂಬ್ ವೀಡಿಯೋಗಳನ್ನು ಮತ್ತು ಸಿನಿಮಾಗಳನ್ನು ನೋಡಲು ತಿಳಿಸಲಾಯಿತು.

*ಮನೆಯಲ್ಲಿಯೇ ಇರುವ ಹಿರಿಯ ವಿದ್ಯಾರ್ಥಿಗಳಿಗೆ ತಮ್ಮ ಸಹೋದರ ಸಹೋದರಿಯರಿಗೆ ಕಲಿಕೆಗೆ ಸಹಾಯ ಮತ್ತು ಮಾರ್ಗದರ್ಶನ ಮಾಡಲು ನೆರವಾಗಬೇಕೆಂದು ತಿಳಿಸಲಾಯಿತು.

*8ನೇ ತರಗತಿ ವಿದ್ಯಾರ್ಥಿಗಳ ವಾಟ್ಸಾಪ್ ಗುಂಪು ರಚಿಸಿ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ವಿಷಯವನ್ನು ನೀಡಿ ಅದನ್ನು ಪೂರ್ಣಗೊಳಿಸಿ ಗುಂಪಿಗೆ ಕಳುಹಿಸಬೇಕೆಂದು ತಿಳಿಸಲಾಯಿತು. ಎಲ್ಲ ವಿದ್ಯಾರ್ಥಿಗಳು ವಹಿಸಿದ ಕಾರ್ಯ ಪೂರ್ಣಗೊಳಿಸಿ ವಾಟ್ಸಪ್ ಗುಂಪಿಗೆ ತಮ್ಮ ಬರವಣಿಗೆಯನ್ನು ಕಳುಹಿಸಿದ್ದು ತುಂಬಾ ಸಂತೋಷದಾಯಕವಾಯಿತು. ಇದರಿಂದ ಮಕ್ಕಳಿಗೆ ಇನ್ನಷ್ಟು ವಿಷಯಗಳನ್ನು ಹಂಚಿಕೊಳ್ಳಲು ನೆರವಾಯಿತು.


     ****** ಧನ್ಯವಾದಗಳು*****

Comments