ಅಸೈನ್ಮೆಂಟ್ 8
ಅಸೈನ್ಮೆಂಟ್ - 8
ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ರವೇಲಿ.
ಮಕ್ಕಳ ಕಲಿಕೆಗೆ ಸಹಾಯವಾಗುವಂತಹ ವಿವಿಧ ಪಾಠಗಳ ರಸಪ್ರಶ್ನೆಗಳ ವಿವರ....
ಶಿಕ್ಷಕರ ಹೆಸರು :- ರಘುಪತಿ ರೆಡ್ಡಿ ಪಿ
೧) ಇತಿಹಾಸದ ಪಿತಾಮಹ ಯಾರು?
ಉ:- ಹೆರೋಡಾಟಸ್
೨) ಶಾಸನಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಉ:- ಅಶೋಕ
೩) ಕಲ್ಹಣನ ಕೃತಿ ಯಾವುದು?
ಉ:- ರಾಜತರಂಗಿಣಿ
೪) ಪ್ರಸಿದ್ಧ ಜೋಗ ಜಲಪಾತ ಯಾವ ನದಿಗೆ ಇದೆ?
ಉ:- ಶರಾವತಿ
೫) ಆಲಮಟ್ಟಿ ಜಲಾಶಯ ಯಾವ ನದಿಗೆ ಕಟ್ಟಲಾಗಿದೆ?
ಉ:-ಕೃಷ್ಣಾ ನದಿ
೬) ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ?
ಉ:-೩೦
೭) ಕಲ್ಯಾಣ ಕರ್ನಾಟಕ ವಿಭಾಗದ ಜಿಲ್ಲೆಗಳು ಎಷ್ಟು?
ಉ:-6 ಜಿಲ್ಲೆಗಳು
೮) ಕಾವೇರಿ ನದಿಯ ಉಗಮ ಸ್ಥಾನ ಯಾವುದು?
ಉ:-ತಲಕಾವೇರಿ
೯) ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಯಾವುದು?
ಉ:-ಬೆಳಗಾವಿ
೧೦) ಮೂಲಭೂತ ಹಕ್ಕುಗಳು ಸಂವಿಧಾನದ ಯಾವ ಭಾಗದಲ್ಲಿ ಅಳವಡಿಸಲಾಗಿದೆ?
ಉ:-ಭಾಗ-3
೧೧) ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ದೇಶದಿಂದ ಪಡೆಯಲಾಗಿದೆ?
ಉ:-ಐರಿಶ್ ಸಂವಿಧಾನ
೧೨) ಮೈಸೂರು ಹುಲಿ ಎಂದು ಯಾರನ್ನು ಕರೆಯುತ್ತಾರೆ?
ಉ:-ಟಿಪ್ಪು ಸುಲ್ತಾನ್
೧೩) ಸಂವಿಧಾನ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ?
ಉ:-ಡಾ. ಬಿ ಆರ್ ಅಂಬೇಡ್ಕರ್
೧೪) ಮೂಲಭೂತ ಕರ್ತವ್ಯಗಳು ಎಷ್ಟು?
ಉ:-೧೧
೧೫) ಮಹೆಂಜೋದಾರೋ ಎಂಬುದರ ಅರ್ಥ ಏನು?
ಉ:-ಸತ್ತವರ ದಿಬ್ಬ ಎಂದರ್ಥ
೧೬) ಕರ್ನಾಟಕ ಸಂಗೀತ ಪಿತಾಮಹ ಯಾರು?
ಉ:-ಪುರಂದರ ದಾಸರು
೧೭) ಕನಕದಾಸರ ಅಂಕಿತ ಯಾವುದು?
ಉ:-ಕಾಗಿನೆಲೆ ಆದಿಕೇಶವ
೧೮) ಅನುಭವ ಮಂಟಪದ ಅಧ್ಯಕ್ಷರು ಯಾರಾಗಿದ್ದರು?
ಉ:-ಅಲ್ಲಮಪ್ರಭು
೧೯) ಕನ್ನಡ ಸಾಹಿತ್ಯ ಪರಿಷತ್ತು ಯಾವಾಗ ಸ್ಥಾಪನೆಯಾಯಿತು?
ಉ:-1915
೨೦) ಅಕ್ಕಮಹಾದೇವಿ ಅವರ ಜನ್ಮಸ್ಥಳ ಯಾವುದು?
ಉ:-ಶಿವಮೊಗ್ಗ ಜಿಲ್ಲೆ ಉಡುತಡಿ
೨೧) ಕಾಯಕವೇ ಕೈಲಾಸ ಇದನ್ನು ಹೇಳಿದವರು ಯಾರು?
ಉ:-ಬಸವಣ್ಣನವರು
೨೨) ವೈಪರೀತ್ಯಗಳ ಖಂಡ ಎಂದು ಯಾವುದನ್ನು ಕರೆಯುತ್ತಾರೆ?
ಉ:- ಏಷ್ಯಾ ಖಂಡ
೨೩) ಅತಿ ಚಿಕ್ಕ ಗ್ರಹ ಯಾವುದು?
ಉ:-ಬುಧ ಗ್ರಹ
೨೪) ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?
ಉ:-ಗುರು ಗ್ರಹ
೨೫) ಭಾರತದ ರಾಷ್ಟ್ರೀಯ ವೃದ್ಧ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
ಉ:-ದಾದಾಬಾಯಿ ನವರೋಜಿ
೨೬) ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಯಾರು?
ಉ:-ಹರಿಹರ ಮತ್ತು ಬುಕ್ಕರಾಯ
೨೭) ಶ್ರೀಕೃಷ್ಣ ದೇವರಾಯನ ಎರಡು ಕೃತಿಗಳನ್ನು ತಿಳಿಸಿ?
ಉ:-ಅಮುಕ್ತಮಾಲ್ಯದ, ಜಾಂಬವತಿ ಕಲ್ಯಾಣ
೨೮) ಶ್ರೀಕೃಷ್ಣ ದೇವರಾಯ ಅಪ್ಪಾಜಿ ಎಂದು ಯಾರನ್ನು ಕರೆಯುತ್ತಿದ್ದರು?
ಉ:-ತಿಮ್ಮರಸ
೨೯) ತಾಳಿಕೋಟೆ ಕದನ ಯಾವಾಗ ನಡೆಯಿತು?
ಉ:-1565 ಜನೆವರಿ 23
೩೦) ಬೀದರ್ನಲ್ಲಿ ಮದರಸವನ್ನು ಕಟ್ಟಿಸಿದವರು ಯಾರು?
ಉ:-ಮಹಮ್ಮದ್ ಗವಾನ್
೩೧) ಹೊಯ್ಸಳ ಸಾಮ್ರಾಜ್ಯದ ಸ್ಥಾಪಕ ಯಾರು?
ಉ:-ಸಳ
೩೨) ಕರ್ನಾಟಕವನ್ನು ಆಳಿದ ಮೊದಲ ರಾಜವಂಶ ಯಾವುದು?
ಉ:-ಕದಂಬ ವಂಶ
೩೩) ಅಮೆಜಾನ್ ಕಾಡುಗಳು ಎಲ್ಲಿ ಕಂಡು ಬರುತ್ತವೆ?
ಉ:-ದಕ್ಷಿಣ ಅಮೆರಿಕ ಖಂಡ
೩೪) ಸಮಭಾಜಕ ವೃತ್ತವನ್ನು ಎರಡು ಸಲ ದಾಟುವ ನದಿಯಾವುದು?
ಉ:-ಕಾಂಗೋ ಅಥವಾ ಜೈರೆ
೩೫) ಹೋಮ್ಸ್ ಎಂದು ಕರೆಯಲ್ಪಡುವ ಪಂಚ ಸರೋವರಗಳ ಎಲ್ಲಿ ಕಂಡುಬರುತ್ತವೆ?
ಉ:-ಉತ್ತರ ಅಮೆರಿಕ ಖಂಡ
೩೬) ಡಾಗರ್ ಬ್ಯಾಂಕ್ ಎಂಬುದು ಒಂದು ಮೀನುಗಾರಿಕಾ ಕೇಂದ್ರ ಇದು ಎಲ್ಲಿ ಕಂಡುಬರುತ್ತದೆ?
ಉ:-ಯುರೋಪ್ ಖಂಡ
೩೭) ಕುತುಬ್ ಮಿನಾರ್ ಅನ್ನು ಕಟ್ಟಿಸಿದವರು ಯಾರು?
ಉ:-ಕುತುಬುದ್ದಿನ್ ಐಬಕ್
೩೮) ದೆಹಲಿಯನ್ನಾಳಿದ ಪ್ರಥಮ ಸಾಮ್ರಾಜ್ಞಿ ಯಾರು?
ಉ:-ರಜಿಯಾ ಸುಲ್ತಾನ್
೩೯) ತಾಜ್ ಮಹಲನ್ನು ಕಟ್ಟಿದವರು ಯಾರು?
ಉ:-ಶಹಜಹಾನ್
೪೦) ಜಗದ್ಗುರು ಬಾದಶಾಹ ಎಂದು ಬಿರುದು ಪಡೆದವರು ಯಾರು?
ಉ:-ಎರಡನೇ ಇಬ್ರಾಹಿಂ
೪೧) ಭಾರತದ ಅತಿ ದೊಡ್ಡ ಗುಮ್ಮಟ ಯಾವುದು?
ಉ:-ವಿಜಯಪುರದ ಗೋಲಗುಮ್ಮಟ
೪೨) ಬ್ರಹ್ಮ ಸಮಾಜದ ಸ್ಥಾಪಕರು ಯಾರು?
ಉ:-ರಾಜ ರಾಮ್ ಮೋಹನ್ ರಾಯ್
೪೩) ವೇದಗಳಿಗೆ ಹಿಂತಿರುಗಿ ಎಂದು ಕರೆ ನೀಡಿದವರು ಯಾರು? ಉ:-ಸ್ವಾಮಿ ದಯಾನಂದ ಸರಸ್ವತಿ
೪೪) din-e-ilahi ಧಾರ್ಮಿಕ ಸಂಘವನ್ನು ಸ್ಥಾಪಿಸಿದವರು ಯಾರು? ಉ:-ಅಕ್ಬರ್ ಮಹಾಶಯ
೪೫) ಜೈನ ಧರ್ಮದ ಸ್ಥಾಪಕರು ಯಾರು?
ಉ:-ವರ್ಧಮಾನ ಮಹಾವೀರ
೪೬) ಬುದ್ಧನ ಮೊದಲ ಹೆಸರೇನು?
ಉ:-ಸಿದ್ದಾರ್ಥ
೪೭) ಹರ್ಷವರ್ಧನನನ್ನು ಸೋಲಿಸಿ ಪರಮೇಶ್ವರ ಬಿರುದು ಪಡೆದ ಚಾಲುಕ್ಯರ ದೊರೆ ಯಾರು?
ಉ:-ಇಮ್ಮಡಿ ಪುಲಿಕೇಶಿ
೪೮) ಜಲಿಯನ್ ವಾಲ್ ಬಾಗ್ ಹತ್ಯಾಕಾಂಡ ಯಾವಾಗ ನಡೆಯಿತು?
ಉ:-1919
೪೯) ಪ್ಲಾಸಿ ಕದನ ಯಾವಾಗ ನಡೆಯಿತು?
ಉ:-1757 ರಲ್ಲಿ
೫೦) ಶಿವಾಜಿಯ ತಾಯಿಯ ಹೆಸರೇನು?
ಉ:-ಜೀಜಾಬಾಯಿ
೫೧) ಶಿವಾಜಿಯ ರಾಜಕೀಯ ಗುರು ಯಾರು?
ಉ:-ದಾದಾಜಿ ಕೊಂಡದೇವ
೫೨) ಗುಪ್ತ ಸಾಮ್ರಾಜ್ಯದ ಸ್ಥಾಪಕ ಯಾರು?
ಉ:-ಶ್ರೀ ಗುಪ್ತ
೫೩) ಕದಂಬ ವಂಶದ ಸ್ಥಾಪಕ ಯಾರು?
ಉ:-ಮಯೂರವರ್ಮ
೫೪) ಶಾತವಾಹನ ಮನೆತನದ ಪ್ರಸಿದ್ಧ ದೊರೆ ಯಾರು?
ಉ:-ಗೌತಮಿ ಪುತ್ರ ಶಾತಕರ್ಣಿ
೫೫) ವಂದೇ ಮಾತರಂ ಗೀತೆಯನ್ನು ಬರೆದವರು ಯಾರು?
ಉ:-ಬಂಕಿಮ ಚಂದ್ರ ಚಟರ್ಜಿ
೫೬) ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ತೀರುತ್ತೇನೆ ಎಂದು ಹೇಳಿದವರು ಯಾರು?
ಉ:-ಬಾಲಗಂಗಾಧರ ತಿಲಕ್
೫೭) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ಯಾರು?
ಉ:-ಲಾರ್ಡ್ ಡಾಲ್ ಹೌಸಿ
೫೮) ಶ್ರವಣಬೆಳಗೊಳದ ಗೊಮ್ಮಟೇಶ್ವರನ ವಿಗ್ರಹ ಕೆತ್ತಿಸಿದವರು ಯಾರು?
ಉ:-ಚಾವುಂಡರಾಯ
೫೯) ಕಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
ಉ:-ಲಾರ್ಡ್ ಕಾರ್ನ್ ವಾಲಿಸ್
೬೦) ಕೌಟಿಲ್ಯನ ಇನ್ನೊಂದು ಹೆಸರು ಏನು?
ಉ:-ವಿಷ್ಣುಗುಪ್ತ
೬೧) ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು ಯಾರು?
ಉ:-ವಾಸ್ಕೋಡಿಗಾಮ
೬೨) ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ ಸ್ಥಾಪನೆಯಾಯಿತು?
ಉ:-1600
೬೩) ಭಾರತದ ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ?
ಉ:-ಸರ್ದಾರ ವಲ್ಲಭಾಯ್ ಪಟೇಲ್
೬೪) ಸಂಪತ್ತಿನ ಸೋರಿಕೆ ಸಿದ್ದಾಂತವನ್ನು ಮಂಡಿಸಿದರು ಯಾರು?
ಉ:-ದಾದಾಬಾಯಿ ನವರೋಜಿ
೬೫) ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಮಾತನ್ನು ಹೇಳಿದವರು ಯಾರು?
ಉ:-ಸ್ವಾಮಿ ವಿವೇಕಾನಂದ
೬೬) ಭಾರತದ ಪ್ರಥಮ ರಾಷ್ಟ್ರಪತಿಗಳು ಯಾರು?
ಉ:-ಬಾಬು ರಾಜೇಂದ್ರ ಪ್ರಸಾದ್
೬೭) ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಸ್ಥಾಪಿಸಿದವರು ಯಾರು?
ಉ:-ಸುಭಾಷ್ ಚಂದ್ರ ಬೋಸ್
೬೮) ಸಂವಾದ ಕೌಮುದಿ ಕೃತಿಯನ್ನು ಬರೆದವರು ಯಾರು?
ಉ:-ರಾಜ ರಾಮ್ ಮೋಹನ್ ರಾಯ್
೬೯) ಗಾಂಧೀಜಿಯವರ ರಾಜಕೀಯ ಗುರು ಯಾರು?
ಉ:-ಗೋಪಾಲಕೃಷ್ಣ ಗೋಖಲೆ
೭೦) ಓಬವ್ವನ ಕಿಂಡಿ ಎಲ್ಲಿ ಕಂಡುಬರುತ್ತದೆ?
ಉ:-ಚಿತ್ರದುರ್ಗ ಕೋಟೆಯಲ್ಲಿ
೭೧) ಕಿತ್ತೂರು ರಾಣಿ ಚೆನ್ನಮ್ಮನ ನಂಬಿಕೆಯ ಭಂಟ ಯಾರಾಗಿದ್ದರು?
ಉ:-ಸಂಗೊಳ್ಳಿ ರಾಯಣ್ಣ
೭೨) ರಾಜ್ಯ ಶಾಸ್ತ್ರದ ಪಿತಾಮಹ ಯಾರು?
ಉ:-ಅರಿಸ್ಟಾಟಲ್
೭೩) ದಿ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಅನ್ನು ಸ್ಥಾಪಿಸಿದವರು ಯಾರು?
ಉ:-ಸರ್ ವಿಲಿಯಂ ಜೋನ್ಸ್
೭೪) ಬೆಂಗಳೂರಿನ ನಿರ್ಮಾಪಕರು ಯಾರು?
ಉ:-ನಾಡಪ್ರಭು ಕೆಂಪೇಗೌಡರು
೭೫) ಮೂರನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?
ಉ:-ಶ್ರೀರಂಗಪಟ್ಟಣ ಒಪ್ಪಂದ
೭೬) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಲ್ಲಿಂದ ಪ್ರಾರಂಭವಾಯಿತು?
ಉ:-ಮೀರತ್
೭೭) ದಂಡಿ ಸತ್ಯಾಗ್ರಹ ಯಾವಾಗ ನಡೆಯಿತು?
ಉ:-1930
೭೮) ಜನಗಣತಿ ಎಷ್ಟು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ?
ಉ:-ಹತ್ತು ವರ್ಷಗಳಿಗೊಮ್ಮೆ
೭೯) ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಯಾವುದು?
ಉ:-ಚೀನಾ
೮೦) ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಯಾವುದು?
ಉ:-ಮೌಸಿನ್ ರಾಮ್
೮೧) ಮೊದಲ ರಾಷ್ಟ್ರ ಕವಿಗಳು ಯಾರು?
ಉ:-ಎಂ ಗೋವಿಂದ ಪೈ
೮೨) ಕನ್ನಡದ ಸಂಧಿಗಳು ಎಷ್ಟು?
ಉ:-ಕನ್ನಡದ ಸಂಧಿಗಳು 3 ಲೋಪ ಸಂಧಿ, ಆಗಮ ಸಂಧಿ, ಆದೇಶ ಸಂಧಿ
೮೩)ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕವಿಗಳು ಯಾರು?
ಉ:-ಕುವೆಂಪು
೮೪) ಕನ್ನಡದ ಮೊದಲ ಉಪಲಬ್ದ ಗ್ರಂಥ ಯಾವುದು?
ಉ:-ವಡ್ಡಾರಾಧನೆ
೮೫) ಅಂಬಿಕಾತನಯದತ್ತ ಇದು ಯಾರ ಕಾವ್ಯನಾಮ?
ಉ:- ದ ರಾ ಬೇಂದ್ರೆ
೮೬) ಕನ್ನಡದ ಆಸ್ತಿ ಎಂದು ಯಾರನ್ನು ಕರೆಯುತ್ತಾರೆ?
ಉ:-ಮಾಸ್ತಿ ವೆಂಕಟೇಶ ಅಯ್ಯಂಗಾರ್
೮೭) ಸೂರ್ಯ ಈ ಪದದ ಸಮಾನಾರ್ಥಕ ಪದಗಳನ್ನು ತಿಳಿಸಿರಿ?
ಉ:-ರವಿ, ಭಾನುತೇಜ,ಶಶಿಧರ
೮೮) ಕನ್ನಡದ ಮೊದಲ ಶಾಸನ ಯಾವುದು?
ಉ:-ಹಲ್ಮಿಡಿ ಶಾಸನ
೮೯) ಸಣ್ಣ ಕಥೆಗಳ ಜನಕ ಎಂದು ಯಾರನ್ನು ಕರೆಯುತ್ತಾರೆ?
ಉ:-ಮಾಸ್ತಿ ವೆಂಕಟೇಶ್ ಅಯ್ಯಂಗಾರ್
೯೦) ಕನ್ನಡದ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ?
ಉ:-ಆಲೂರು ವೆಂಕಟರಾಯರು
೯೧) ಕನ್ನಡದ ರತ್ನತ್ರಯರು ಯಾರು?
ಉ:-ಪಂಪ ಪೊನ್ನ ರನ್ನ
೯೨) ಷಟ್ಪದಿಯ ಬ್ರಹ್ಮ ಎಂದು ಯಾರನ್ನು ಕರೆಯುತ್ತಾರೆ?
ಉ:-ರಾಘವಾಂಕ
೯೩) ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ?
ಉ:-ಕುಮಾರವ್ಯಾಸ
೯೪) ಕನ್ನಡಕ್ಕೆ ಇಲ್ಲಿಯವರೆಗೆ ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ?
ಉ:-ಎಂಟು ಪ್ರಶಸ್ತಿಗಳು
೯೫) ಬಡವ ಪದದ ವಿರುದ್ಧಾರ್ಥಕ ಪದ ತಿಳಿಸಿ?
ಉ:-ಶ್ರೀಮಂತ
೯೬) ಕನ್ನಡದ ಸ್ವರಗಳು ಎಷ್ಟು?
ಉ:-೧೩
೯೭) ಮಗು ಈ ಪದದ ಬಹುವಚನ ರೂಪ ತಿಳಿಸಿ?
ಉ:-ಮಕ್ಕಳು
೯೮) ಕವಿತ್ರಿ ಇದು ಯಾವ ಲಿಂಗ?
ಉ:-ಸ್ತ್ರೀಲಿಂಗ
೯೯) 82ನೇ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಿತು?
ಉ:-ರಾಯಚೂರು
೧೦೦) ಗಿಡ ಮರ ಪದ್ಯದ ಲೇಖಕರು ಯಾರು?
ಉ:-ಸತ್ಯಾನಂದ ಪತ್ರೋಟ
Comments
Post a Comment